About us

About SKSBV in Kannada

ಸಮಸ್ತ ಕೇರಳ ಸುನ್ನೀ ಬಾಲವೇದಿ

1993 ಡಿಸೆಂಬರ್ 26 ಕ್ಕೆ ಸ್ಥಾಪಿತವಾಯಿತು
ಇಂತಹ ಒಂದು ಸಂಘದ ಅನಿವಾರ್ಯತೆ ಮನಗಂಡು ಸಮಸ್ತದ ಸಮುನ್ನತರಾದ ನೇತಾರರಾಗಿದ್ದ ಕೆ.ಟಿ ಮಾನು ಮುಸ್ಲಿಯಾರ್ ಹಾಗೂ ಉಮರಲಿ ಶಿಹಾಬ್ ತಂಙಳ್ ಇದನ್ನು ಪರಿಚಯಿಸಿದರು.
ಹಾಲಿ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರಾಗಿರುವ ಪಾಣಕ್ಕಾಡ್ ಸಯ್ಯಿದ್ ಕುಟುಂಬದ ಅನುಗ್ರಹೀತ ಪುತ್ರ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಅಧ್ಯಕ್ಷರಾದ ಸಮಿತಿಯಾಗಿತ್ತು  ಪ್ರಥಮ ಸಮಿತಿ.
ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್, ಕೋಟುಮಲ ಬಾಪು ಉಸ್ತಾದ್ ಸೇರಿದ ಮಹಾನ್ ನೇತಾರರು ಪ್ರಾಥಮಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದರು.  ವಿದ್ಯಾರ್ಥಿಗಳೆಡೆಯಲ್ಲಿ ಧಾರ್ಮಿಕ ವಾತಾವರಣ ಮೂಡಿಸಲು ವಿವಿಧ ಕಾರ್ಯ ಯೋಜನೆಗಳು ಹಮ್ಮಿಕೊಂಡು ಈ ಸಂಘ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದೆ.
ಸಂಧರ್ಭಕ್ಕನುಸಾರವಾದ ಧ್ಯೇಯ ವಾಕ್ಯದೊಂದಿಗೆ ಕರ್ಮ ಪದ್ಧತಿಗಳನ್ನು ಸುನ್ನೀ ಬಾಲವೇದಿ ನಡೆಸಿಕೊಳ್ಳುವುದರಲ್ಲಿ ಯಶಸ್ವಿ ಕಂಡಿದೆ. ಜ್ಞಾನತೀರ, ಬಾಲ ಭಾರತ, ಅಮ್ಮನಿಗೊಂದು ಪ್ರೀತಿಯ ಉಡುಗೊರೆ, ಸತ್ಯ ಸಮ್ಮೇಳನ, ಗುರು ಸಮ್ಮುಖದಲ್ಲಿ, ಭೂಮಿಗೊಂದು ಛತ್ರಿ, ಜಲ ದಿನ ಅಭಿಯಾನ ಸೇರಿದ ವಿವಿಧ ಯೋಜನೆಗಳಿಂದ ಈ ಪುಟಾಣಿ ಸಂಘ ಈಗಾಗಲೇ ಜನಮನ ಗೆದ್ದಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದ ಭಾರತ ರಾಜ್ಯಗಳ ಹೊರತಾಗಿ
ಕರ್ಮ ಸಾಫಲ್ಯದ ಧನ್ಯತೆಯೊಂದಿಗೆ ಸುನ್ನೀ ಬಾಲ ವೇದಿ ಬೆಳ್ಳಿ ಹಬ್ಬ ಆಚರಿಸಲು ಅಣಿಯಾಗಿ ನಿಂತಿದೆ.
ಬನ್ನಿ ನಮ್ಮ ಮಕ್ಕಳನ್ನೂ ಈ ಸಂಘಕ್ಕೆ ಸೇರಿಸಿ ತಮ್ಮ ಭವಿಷ್ಯವನ್ನು ಖಚಿತಪಡಿಸೋಣ. ಅಹ್ಲುಸ್ಸುನ್ನದ ಸತ್ಯ ಪಾದದಲ್ಲಿ ಅಣಿಯಾಗಿ ನಿಲ್ಲೋಣ….